ರೋಹ್ತಾಸ್‍ಗಢ್ ಅಥವಾ ರೋಹ್ತಾಸ್ ಕೋಟೆಯು ಬಿಹಾರ ರಾಜ್ಯದ ಸಣ್ಣ ಪಟ್ಟಣವಾದ ರೋಹ್ತಾಸ್‍ನಲ್ಲಿ, ಸೋನ್ ನದಿ ಕಣಿವೆಯಲ್ಲಿ ಸ್ಥಿತವಾಗಿದೆ. ಇದು ಕುಶ್ವಾಹಾ/ಕುಶ್‍ವಂಶಿ ರಾಜವಂಶದ ಸಂಕೇತವಾಗಿದೆ. == ವಾಸ್ತುಕಲೆ == ಇದು ವಿಶ್ವದ ಅತಿ ದೊಡ್ಡ ಕೋಟೆಗಳಲ್ಲಿ ಒಂದು. ಇದು 42 ಚದರ ಕಿ.ಮಿ. ವಿಸ್ತೀರ್ಣ ಹೊಂದಿದೆ. === ಹಾಥಿಯಾ ಪೋಲ್ === ಮುಖ್ಯ ಪ್ರವೇಶದ್ವಾರವನ್ನು ಹಾಥಿಯಾ ಪೋಲ್ ಎಂದು ಕರೆಯಲಾಗುತ್ತದೆ. ಇದಕ್ಕೆ ಇದನ್ನು ಅಲಂಕರಿಸುವ ಆನೆಗಳ ಪ್ರತಿಮೆಗಳ ಹೆಸರನ್ನು ಇಡಲಾಗಿದೆ. === ಆಯಿನಾ ಮೆಹೆಲ್ === ಆಯಿನಾ ಮೆಹೆಲ್ ಮಾನ್ ಸಿಂಗ್‍ನ ಮುಖ್ಯ ಹೆಂಡತಿಯ ಅರಮನೆಯಾಗಿತ್ತು. ಇದು ಅರಮನೆಯ ಮಧ್ಯದಲ್ಲಿದೆ. === ಜಾಮಾ ಮಸೀದಿ ಮತ್ತು ಹಬ್ಷ್ ಖಾನ್‍ನ ಭವ್ಯ ಸಮಾಧಿ === ಅರಮನೆ ಮೈದಾನದ ಹೊರಗೆ ಜಾಮಾ ಮಸೀದಿ, ಹಬ್ಷ್ ಖಾನ್‍ನ ಭವ್ಯ ಸಮಾಧಿ ಮತ್ತು ಶೂಫ಼ಿ ಸುಲ್ತಾನ್‍ನ ಮಕ್ಬರಾ ಇದೆ. ಸುಂದರ ತಿಳಿಗಚ್ಚು ಶೈಲಿಯುಳ್ಳ, ಕಂಬಗಳ ಮೇಲೆ ನಿಂತಿರುವ ಗುಮ್ಮಟವಿರುವ ಕಟ್ಟಡವು ರಾಜ್‍ಪುತಾನಾ ಶೈಲಿಯ ನೆನಪನ್ನು ತರಿಸುತ್ತದೆ. === ಗಣೇಶ ದೇವಾಲಯ === ಗಣೇಶ ದೇವಾಲಯವು ಮಾನ್ ಸಿಂಗ್‍ನ ಅರಮನೆಯ ಪಶ್ಚಿಮಕ್ಕೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದೆ. === ಜೋತಾಡುವ ಮನೆ === ಪಶ್ಚಿಮದ ಕಡೆಗೆ ಮುಂದಕ್ಕೆ, ಯಾವುದೋ ನಿರ್ಮಾಣ ನಡೆದಿರಬೇಕು. ಆದರೆ ಅದೇನೆಂದು ಯಾವುದೇ ಲಿಖಿತ ಸಾಕ್ಷ್ಯಾಧಾರವಿಲ್ಲ. ಸ್ಥಳೀಯರು ಇದಕ್ಕೆ ಜೋತಾಡುವ ಮನೆ ಎಂದು ಕರೆಯುತ್ತಾರೆ, ಏಕೆಂದರೆ ಇಲ್ಲಿಂದ ಪತನವು ನೇರ ೧೫೦೦ ಅಡಿ ಕೆಳಗೆ ಆಗುವುದು ಮತ್ತು ಮಾರ್ಗದಲ್ಲಿ ಯಾವುದೇ ಅಡೆತಡೆಗಳಿಲ್ಲ. === ರೋಹ್ತಾಸನ್ ದೇವಾಲಯ ಮತ್ತು ದೇವಿ ದೇವಾಲಯ === ಅರಮನೆಯಿಂದ ಸುಮಾರು ಒಂದು ಮೈಲಿ ಈಶಾನ್ಯಕ್ಕೆ ಎರಡು ದೇವಾಲಯಗಳ ಅವಶೇಷಗಳಿವೆ. ಒಂದು ಶಿವನ ದೇವಾಲಯವಾದ ರೋಹ್ತಾಸನ್. ದೇವಿ ಮಂದಿರದ ಮೇಲೆ ಗುಮ್ಮಟಗಳಿವೆ. ಸ್ಥಳೀಯ ಭಾಷೆಯಲ್ಲಿ ಇದನ್ನು "ಚೌರಾಸನ್ ಸಿದ್ಧಿ" ಎಂದು ಕರೆಯಲಾಗುತ್ತದೆ. == ಉಲ್ಲೇಖಗಳು == === ಗ್ರಂಥಸೂಚಿ ===